Wednesday, 22 April 2020

ನಾಳೆ

ನಾಳೆ ಎಂಬುದು ತೆರೆಯದ ಪುಟ ।
ಹರುಷದ ಗದ್ಯವೋ,
ದುಃಖದ ಪದ್ಯವೋ,
ಅರಿತವರಾರು.....
ಅಕ್ಷರಗಳು ನಗಿಸುವವೋ,
ಕಣ್ಣೀರ ಹರಿಸುವವೋ,
ಬಲ್ಲವರಾರು .....
ಅರಿಯದ ನಾಳಿನ ಕೊನೆ ಸಾಲಿಗಿಂತ,
ಅರಿತ ಇಂದಿನ ಮುನ್ನುಡಿಯೇ ಲೇಸು ।।

1 comment:

  1. ಬರೀ ನಾಳೆಯ ಬಗ್ಗೆ ಯೋಚಿಸುವುದೇ ಜೀವನವಲ್ಲ ಅದ್ಬುತವಾಗಿ ಬಿಂಬಿಸಿ ಬರೆದಿರುವೆ ಗೆಳೆಯ ❤️

    ReplyDelete